ನನ್ನೊಳಗೆ ಬಲೆಯೊ ನಾನು ಬಲೆಯೊಳಗೊ
ಜಿಜ್ಞಾಸೆಯೊಂದು ಬಲಿತು ನಿಂತಿಹುದು
ಉತ್ತರವರಸಿ ಅರಗಿಸುವ ಮುನ್ನ
ಪ್ರಶ್ನೆಯೂ ಬಲೆಯೊಳಗೆ ಸಿಲುಕಿದಂತಿಹುದು
ಹೊರನೋಟ ಗೋಜಲು ಒಳನೋಟವೂ ಅಯೋಮಯ
ಅಡಿಯಿಟ್ಟಲ್ಲೆಲ್ಲ ಬರಿಯ ಗೌಜಿ ಗುಲ್ಲು
ಮೌನ ಕಟ್ಟೆಯನೊಡೆದು ಮಾತಿನರಮನೆ
ಕಟ್ಟಿದರೂ ; ಅರ್ಧವಷ್ಟೆ ಸತ್ಯ ಮಿಗಿದರ್ಧ ಸುಳ್ಳು
ಬದುಕು ಬಣ್ಣದ ಒಳಗೊ ಬಣ್ಣವೇ ಬದುಕೊ
ಬಣ್ಣನೆಯ ಬಣ್ಣದಾಚೆಯ ಬರಿಯ ಮಸಿಯೋ?
ಝಗಮಗಿಪ ಜಗವ ಜಾಲಾಡಿ ನೋಡಿದರೆ
ಮೃಗತೃಷ್ಣೆಯಂತೆ ಬರಿಯ ಹುಸಿಯೋ
~Geethalakshmi Kochi
ಚಂದದ ಕವಿತೆ. ಕೊನೆಯ ಪ್ಯಾರಾ ತುಂಬಾ ಇಷ್ಟವಾಯ್ತು...💜💜
ReplyDeleteಧನ್ಯವಾದಗಳು❤️
Deletenice
ReplyDeleteNice poem!!
ReplyDeleteBadukina bhavyateya bagge bahala chikkadagi chokkadagi varnisiddira.....
ReplyDeleteAmazing.......