Saturday 18 November 2017

While defining "ಸಮಯ"

ಈ ಸಮಯಕ್ಕೆ ಯಾರ ಹಂಗೂ ಇಲ್ಲ
ಯಾರ ಗುಂಗೂ ಇಲ್ಲ
ಕನಸ ಸಪ್ಪಳ ಕೇಳಿಸುವುದಿಲ್ಲ
ಭೂತ ಕಸವಾಗುತ್ತದೆ
ನಾಳೆಗಳನ್ನು ನೀರಾಗಿಸಿ
ಇಂದು ಘನೀಭವಿಸುತ್ತದೆ ;
ಮರುಕ್ಷಣವೇ ಅದೂ ಕರಗಿ
ಬೊಗಸೆಯ ಸಂದಿನಲ್ಲಿ
ಜಿನುಗತೊಡಗುತ್ತದೆ
ಕೈಯಲ್ಲಿರುವ ಕ್ಷಣಗಳಲ್ಲಿ
ನಾಳೆಗಳನ್ನು ರೂಪೀಕರಿಸುವ
ಜಿದ್ದಾಜಿದ್ದಿನ ನಡುವೆ
ರಸ್ಕಿನ್ ಬಾಂಡ್ ನೆನಪಾದ
When all the wars are done ,
A butterfly will be still
Beautiful ಎಂದ....!!


~Geethalakshmi Kochi

2 comments:

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...