Monday 27 November 2017

ಮತ್ತೆ ಕತ್ತಲೆಗೆ....

ಹಣತೆ ಹಚ್ಚಲಿ ಎಲ್ಲಿ
ಬೆಳಕ ಬಿತ್ತಲಿ ಎಲ್ಲಿ
ಪ್ರಖರ ತೀವ್ರತೆಯಲ್ಲಿ
ಝಗಮಗಿಪ ಜಗದಿ

ಥಳುಕು ಬಳುಕಿನ ಮೋಡಿ
ಮೆರುಗಿನದೆ ಮೆರವಣಿಗೆ
ರಾತ್ರಿ ಹಗಲೆರಡು ಒಂದೆ
ಬೆಳಕ ಬಂಧನದಿ

ನಗರಗಳು ಬೆಳೆಯುತಿವೆ
ಬೆಳಕನ್ನೆ ಬೆಳಗುತಿವೆ
ಕತ್ತಲೆಯು ಬೆತ್ತಲೆಯು
ಬೆಂಕಿಯದೆ ಬೂದಿ

ಇಲ್ಲೆಲ್ಲು ಇರುಳಿಲ್ಲ
ಬೆಳಕಿಗೂ ಬೆಲೆಯಿಲ್ಲ
ಬಿಸಿಲು ಉರಿ ಎಲ್ಲೆಲ್ಲು
ಬತ್ತಿಹುದು ಬದುಕು

ಮತ್ತೆ ಬಾ ಮರಳೋಣ
ಕತ್ತಲೆಯ ಮುಗ್ಧತೆಗೆ
ಉಳಿಸೋಣ ಇರುಳ
ಮೂಡಿಸಲು ಹಣತೆ

ಚುಕ್ಕಿ ತಾರೆಗಳಲ್ಲಿ
ಮತ್ತೆ ಚಂದ್ರಮನಲ್ಲಿ
ಮಿಂಚುಹುಳ ಹೊಳೆವಲ್ಲಿ
ಪ್ರೀತಿ ಒಲವಿನ ಒರತೆ


~Geethalakshmi Kochi

1 comment:

ಗೀತಳ ಗೀಚು

1.) ಬದುಕು ಬಣ್ಣಗಳಲ್ಲಿ.... 2)ಕಲೆಗೆ ದೃಷ್ಟಿಯ ಪರಿವೆಯಿಲ್ಲ ಅದು ದೃಷ್ಟಿಕೋನ !  3.)ಆಯಾಮದ ಅನುಮಾನ ಅನುಭೂತಿಗೇಕೆ ? 4.)ಸಾಲುಗಳಲ್ಲಿಲ್ಲದ ಅಚ್ಚುಕಟ್ಟು ಸರಳ ರೇಖೆಯಲ್ಲ...